Saturday 19 October, 2013

ಆರ್ಕೊಟ್ರೆ ಅತ್ತೆ ಕಡಿ- ಮೂರ್ಕೊಟ್ರೆ ಸ್ವಸೆ ಕಡಿ...!

ತ್ಯಗ್ಳಿದ್ ಹಳ್ಸೋಕು ಮುಂಚ್ಕೆ
ಹೊಗ್ಳಾಕೋ ಕಾಲ ಕನ ಇದು..!

ಸತ್ತೋರ್ನ ಚಟ್ಟುಕ್ಕಟ್ಟಿ
ಗುಂಡಿಲ್ ಮುಚ್ಚಕ್ಕು-ಸುಟ್ಬರಕ್ಮುಂಚ್ಗೆ-

ಕ್ವಂಡಿನ ಕೆಂಡುದ್ಮುಂದೆ
ಉದಾಗ ಬಡಿತಿರರು ಅಲ್ವೆನ..

ಸಾವಿಗ್ಬರೋ ಸಂಬಂದಿಕ್ರು
ಉದಾಗುದರ್ ಕೈಲಿ ಹ್ವಗ್ಳಾಕ್ಸರು...

ಸತ್ತೋದರ್ಗು ಸಾವಿಗ್ಬಂದರ್ಗೂ
ಸಂಬಂಧ ಹ್ಯೋಳ್ರೆ ಸಾಕಿತ್ತು ಹ್ವಗ್ಳಾಕರಲ್ವೆನಾ..

ಜಡ್ ಜಡ್ ಜಡ್ಡಾ...ಜಡ್ ಜಡ್ ಜಡ್ಡಾ
ಬಡ್ಯೋದ್ ನಿಲ್ಸಿ ಹ್ವಗ್ಳೋರಲ್ವೆನಾ

ಒ- ಅಂದ್ರೆ ಆ-ಅಂತೀನಿ
ಆ-ಅಂದ್ರೆ ಒ-ಅಂತೀನಿ ಅಂತ್ ಸುರಚ್ಕಳರ್ ಕನ

ಹ್ವಗ್ಳಾಕೋನ್ಗೆ ಸತ್ತೋರು ಗ್ವತ್ತಿರರು
ಸಾವಿಗ್ಬಂದ್ ಸಂಬಂದಿಕ್ರು ಗ್ವತ್ತಿರರಲ್ವೆನಾ...?

ಎಲ್ಲರ್ಗೂ ಹ್ವಗ್ಳಕ್ ಬತ್ತಿರ್ಲಿಲ್ಲ ಕನ
ಹ್ವಗ್ಳೋ ಕಲಿ ಗ್ವತ್ತಿರರ್ನ ಉದಾಗುದರು ಕರ್ಕೋ ಬರಾರಲ್ವೆನಾ..?

ಈಗ್ ತಾನೆ ಬೈದೋನ್ನ ಇನ್ನೊಂದಷ್ಟೊತ್ಗೆ
ಹ್ವಗ್ಳಿ ಅಟ್ಗೇರ್ಸಿ ಸಂಬಂದ ಗಟ್ಮಾಡ್ಕಾತಾರ್ಕನ

ಅದ್ಕೆ ಅಲ್ವೆ ಆರ್ಕೊಟ್ರೆ ಅತ್ತೆ ಕಡಿ
ಮೂರ್ಕೊಟ್ರೆ ಸ್ವಸೆ ಕಡಿ ಅನ್ನೋ ಗಾದಿ ಮಾತ್ ಹ್ಯೋಳದು...!

--ಮಯಾಸ

No comments:

Post a Comment