Wednesday 19 December, 2012

ಬುಡತ್ಲೆಗೆ...!

ಇಬ್ರೂ ಸೇರ್ಕಂಡೆ
ಒಪ್ಕಂಡೆ ಪಿರೂತಿ ಮಾಡಿದ್ವಿ
ನನ್ ಮರ್ತ್ ನೀ-
ಗಟ್ಮುಟ್ಟಾಗ್ ಗುಂಡ್ಕಲ್ ಇದ್ದಂಗಿದ್ದೀ
ಮತ್ ನಾ ಯಾಕ್ 
ಕಣ್ಣೀರಾಕಂಡ್ ಗೋಳಾಡ್ಕಂಡ್
ಕಾಲ ತಳ್ಲೀ ಮಾರಾಗಿತ್ತಿ
ನಗ್ಸೋರ್ ಸಿಕ್ಕೇ ಸಿಗ್ತಾರ
ನಕ್ಕಂಡ್ ನಕ್ಕಂಡೆ
ಕಾಲಕಳಿತೀನ್ ಬುಡತ್ಲೆಗೆ...!
-ಮಯಾಸ

Tuesday 18 December, 2012

ಬೆಳ್ಯೋಸಿರಿ ಮೊಳ್ಕೇಲ್ ತಿಳಿ ಅನ್ನೋ ಗಾದಿ ಮಾತ್ ದಿಟಲ್ವೇನಾ...?

ಕಂಡೋರ್ ತ್ವಾಟಕ್ ನುಗ್ಗಿ
ಕಿತ್ಲೆ, ಹಲ್ಸು, ಸೀಬೆಹಣ್ ಕದ್ಯಕ್ಕೋಗಿ 
ಮೈ-ಕೈ ತರುಚ್ಸ್ಕಂಡ್ ಬಂದು
ಹಿರಿಕ್ರಿಂದ ಗೂಸತಿಂದ್ ಬೈಸ್ಕಳ್ತಿದ್ವಿ...!

ಹರ್ಯೋನೀರಲ್- ಆಳುದ್ ಕೆರೇಲಿ
ಕದ್ಮುಚ್ ಈಜಾಡುದ್ ಮ್ಯಾಕೆ
ಮೈಕೈಗೆಲ್ಲ ಮಣ್ ತಿಕ್ಕಂಡ್ ಬಂದ್ರು
ಮನ್ಯೋರ್ ಕೈಗೆ ಸಿಗೇ ಬೀಳ್ತಿದ್ದಿ...!

ಯಾರ್ಮನೆದೇ ಆಗ್ಲಿ ನಾಟಿಕೋಳಿ ಕಂಡ್ರೆ
ವದ್ದೆ ಮಾಡಿದ್ ಬಟ್ಟೆ ಬಿಸಾಕಿ ಕೋಳಿ ಕದಿತಿದ್ವಿ
ವಾರ್ಗೆ ಐಕ್ಳು ಸೇರ್ಕಂಡ್ ಕಾಡಬ್ಬ ಮಾಡ್ಕೋತಿದ್ವಿ
ಎಷ್ಟ್ ಯಚ್ರಿಕೆ ವಯ್ಸಿರು ಮತ್ ಸಿಗಾಕ್ಕೋತಿದ್ವಿ...!

ಲಕ್ಷ್ಮಿ-ಸರ್ಸ್ವತಿ ಪೂಜೆ ಹೆಸ್ರೇಳಿ
ಅತ್ತು ಕರ್ದೂ ಮನಿಂದ್ ಕಾಸ್ ಇಸ್ಕೋತಿದ್ವಿ
ಬಾಡ್ಗೆ ಸೈಕಲ್ ಕಲ್ಯೋಕ್ಕೋಗಿ ಬಿದ್ ಬತ್ತಾ ಇದ್ವಿ
ಶಾಲಿಗ್ ಹೋಗ್ದೆ ಕದ್ ಕೂತು ಮನಿಗ್ ಹೋಗಾಕ್ ಹೆದ್ರುತಿದ್ವಿ..!

ಯೋನ್ ಮಾಡಿರು ಸಿಗಾಕೊಳಾವಿ-ಮನಿಗೋಗಾವಿ
ಕ್ವಾಣೆಲ್ಕೂರ್ಸಿ ಮೆಣ್ಶಿನ್ಕಾಯ್ ಹೋಗೆ ಹಾಕೋರ್
ಬಾರ್ಕೋಲ್ ತಕ್ಕಂಡ್ ಬಾಸುಂಡೆ ಬರಂಗ್ ಪೆಟ್ ಕೊಡಾರು
ದಂಡ್ಸಿ ಸುಮ್ಕಾತಿರ್ಲಿಲ್ಲ ಊರೆಲ್ಲ ಸಾರೋರು..!

ಮೈಮೂಳೆ ಬೆಂಡ್ ತೆಗ್ಯೋದ್ ಸಯ್ಸೋಕಾಗ್ದೆ
ಬೆಳ್ ಬೆಳಿತ ಚಾಳಿ ಬಿಡ್ದೆ ಬ್ಯಾರೋನು ತೋಚ್ತಿರ್ಲಿಲ್ಲ
ಮತ್ಮತ್ ಸಿಗಾಕಂಡ್ ಅವ್ಮಾನ ಸಯ್ಸೋದ್ ಅಬ್ಯಾಸ ಆಗ್ಬುಟ್ಟಿರದು
ಗೆದ್ರೂ ಹಿಗ್ತಿರ್ಲಿಲ್ಲ-ಸೋತ್ರು ಕುಗ್ತಿರ್ಲಿಲ್ಲ ಮರ್ಳಿ ಯತ್ನ ಮಾಡೇ ತೀರೆವು..!

ಈಗ್ನ್ ಐಕ್ಳು ಒಂದ್ ಅಂಕ ಕಮ್ಮಿ ತಗಂಡ್ರು ಪುಕ್ಲುಗುಡ್ತಾವೆ
ದ್ವಡ್ ಪರೀಕ್ಷೆಲಿ ಪೇಲಾದ್ರಂತು ತರ್ಗುಟ್ ಹೋತ್ತಾವೆ
ಸಣ್ ಸುಳ್ಳೇಳಿ ಸಿಗಾಕಂಡ್ರು ಅಳೋಕ್ ಶುರಾತ್ತವೆ
ಬೆಳ್ಯೋಸಿರಿ ಮೊಳ್ಕೇಲ್ ತಿಳಿ ಅನ್ನೋ ಗಾದಿ ಮಾತ್ ದಿಟಲ್ವೇನಾ...?

ಸಣ್ಪುಟ್ ಅವ್ಮಾನ ಸಯ್ಸೋದು...ಮತ್ ಚಾಟಿಬಿಲ್ ಆಡ್ ನಲ್ಯೋದು
ಮಾಡಿದ್ ತಪ್ಗೆ ಹೆತ್ತೋರ್ಕೊಡೋ ಶಿಕ್ಷೆ ಅನ್ವಬ್ಸೋದು
ಬದುಕ್ನ ಬಂದಂಗ್ ದೂಡ್ಕಂಡ್ ಹ್ವಾಗಾದ್ ಕಲುತ್ಕಬೇಕ್ ಕನ
ಜಾಣುಗ್ ಮಾತಿನ್ಪೆಟ್ಟು ಕ್ವಾಣುಗ್ ದೊಣ್ಣೆ ಪೆಟ್ ಸರಿತ್ತಲ್ವೇನಾ...???
--ಮಯಾಸ

Monday 17 December, 2012

ಹರ್ದೋದ್ ಬಟ್ಟಿದ್ರ ಕವ್ದಿ ಹ್ವಲ್ದ್ಕಂಡ್ ಕೂರಾರು

ವಳ್ಳುಕ್ ವನ್ಕೆಹಾಕ್ ಕುಟ್ವಾಗ
ಬೀಸೋ ಕಲ್ನಾಗ ಹಿಟ್ಮಾಡ್ವಾಗ
ಮುನುಸ್ಕಂಡವ್ರು ಕುಂತಿದ್ರು
ಪದುಕ್ ಪದ ಹಾಡೋರು...!

ರಾಗುಕ್ ರಾಗ ಸೇರ್ಸೋರು
ಪದ ಹಾಡ್ತಾನೆ ಮುನ್ಸ್ ಮರ್ಯಾರು
ಮನ್ಸತ್ವ ಮೆರ್ಯಾಕ್ ಕುಂತ್ರ
ಹೊಸ ಪದುಕ್ ಹುಟ್ ಕೊಡಾರು...!

ಮಾತ್ ಮಾತಾಡ್ತಾನೆ ಮಾರುದ್ದ ಹೂ ಕಟ್ಟೋರು
ಕತೆ ಹ್ಯೋಳ್ತಾನೆ ಕಾಳುಕಡ್ಡಿ ಬಿಡ್ಸಾರು
ಸೊಪ್ ಸೋಸ್ತಾನೆ ಸೋಬನೆ ಪದ ಕಟ್ಟೋರು
ಬದುಕ್ ಮಾಡ್ಕಂಡೆ ಬುಟ್ಟಿಗಿಟ್ಟಿ ನೇಯೋರು..!

ಹರ್ದೋದ್ ಬಟ್ಟಿದ್ರ ಕವ್ದಿ ಹ್ವಲ್ದ್ಕಂಡ್ ಕೂರಾರು
ಊಟಾದ್ಮೇಕಿ ಎಲಿಅಡ್ಕಿ ಜಿಕ್ಕಂಡ್ ಹರ್ಟಿ ಹೊಡ್ಯಾರು
ಇತ್ತಿತ್ಲಾಗ ಮುಕುಕ್ ಮುಕ ಎದ್ರುಬದ್ರಾದ್ರೂ
ಒಬ್ರೊಬ್ರು ಕೂಡ ಮಾತಿಲ್ಲ ಕತಿಲ್ಲ...ಯಾಕಿಂಗಾತೋ...???
--ಮಯಾಸ

Saturday 15 December, 2012

ಅವ್ರವ್ರ್ ವಗ್ಟ್ ಅವ್ರವ್ರೆ ಬಿಡ್ಸ್ಕ ಬ್ಯೋಕಲ್ವೇನಾ...?!?


ಜಗ್ಲಿ ಮ್ಯಾಲೋ... ವಟಾರ್ದಲ್ಲೋ
ಪುರ್ಸೊತ್ಮಾಡ್ಕಂಡ್ ಕುಕ್ರಬಡ್ಕಂಡ್
ವಗಟೇಳ್ಕಂಡ್  ವಗುಟ್ಬಿಡ್ಸ್ಕಂಡ್
ಬುಲ್ಡೆಗೆ ಕೆಲ್ಸಕೊಡ್ತಿದ್ವು ಅಲ್ವೇನ...?

ಆಕಾಶುದ್ ಮದ್ಯುದಲ್ ಕಪ್ಚುಕ್ಕಿ ಅಂದ್ರೆ
ಓಹೋಹೋ ನಂಗೊತ್ತಾತು ಕಣ್ಣು ಅನ್ನವಿ
ವಗ್ಟೇಳೋದ್ರಾಗ ಎತ್ತಿದ್ ಕೈ ಅನ್ನೋರ್ಗೆ
ಉತ್ರುವೇ ಇಲ್ದ ವಗ್ಟೇಳಿ ಆಟಾಡ್ಸವಿ..!

ಯಾರ್ಯಾರ್ಗೋ ಕ್ಯೊಳಿದ್ ವಗ್ಟು
ಉತ್ರುವೇ ಸಿಗ್ದೇ..ಒಡಾಡ್ತಿರದು
ಕೆಲ್ವ್ ವಗ್ಟಂತು ಸಿಕ್ ಸಿಕ್ಕಾಗಿರಾವು
ಸಿಕ್ ಸಿಕ್ಕರ್ನೆಲ್ಲ ಕ್ಯೋಳಂಗಾಗದು...!

ಇತ್ತಿತ್ಲಾಗೆ ಬದ್ಕಿಗೆ ಬದ್ಕೆ
ವಗ್ಟಾಗ್ ಹ್ವಾಗಿರ್ಬೇಕಾರೆ
ವಗ್ಟ್ ಹ್ಯೋಳೋರೆ ಇಲ್ದಂಗಾಗೈತೆ
ಇನ್ ವಗ್ಟ್ ಬಿಡ್ಸಾರ್ ಯೊಲ್ಲಿಂದ ಬಂದಾರು..?

ದಿನ್ವಿಡಿ ಬಿಸಿಬಿಸಿಯಾಗಿರರು
ಬದುಕ್ ದೂಡಕ್ ಹೆಣ್ಗಾರ್ ನಡ್ವೆ
ಪುರ್ಸೊತ್ತನ್ನದೇ ವಗ್ಟಾಗಿರ್ಬೇಕಾರೆ
ಅವ್ರವ್ರ್ ವಗ್ಟ್ ಅವ್ರವ್ರೆ ಬಿಡ್ಸ್ಕ ಬ್ಯೋಕಲ್ವೇನಾ...?!?
  -ಮಯಾಸ

Thursday 13 December, 2012

ಆತ್ರುಗೆಟ್ರ ಯಡ್ವಿ ಬೀಳ್ಲೇಬೇಕಲ್ವೆನಾ...?!?

ಮನ್ಯಾಕಿ ಕೆಮ್ಮೋಳಾದ್ರು 
ನಮ್ಮೋಳೆವಾಸಿ
ಅನ್ನೋ ಗಾದಿ ಮಾತ್ಗ
ಮರ್ಮಾತಾಡಂಗಿಲ್ಲ ಅಲ್ವೇನಾ..?

ವೇದ್ಸುಳ್ಳಾದ್ರು
ಗಾದಿ ಮಾತ್ ಸುಳ್ಳಲ್ಲನ್ನೋ ಗಾದಿ ಮಾತ್
ಮರ್ತ್ ಮಲ್ಗಂಗಿಲ್ಲ ಅಲ್ವೇನಾ
ಹಿರಿಕ್ರು ಸುಮ್ ಸುಮ್ಕೆ ಹ್ಯೋಳಿಲ್ಲ ಕನ ..!

ಹಾದಿಬೀದಿಲ್ ತಿರ್ಗೋರ್ಕಂಡ್
ತಿಗ್ಣಿ ತಿರುಗ್ದಂಗ್ ಯಾಕ್ ತಿರುಗ್ತೀ
ಅಂತಿದ್ ಗಾದಿ ಮಾತ್ ಮರುತ್ ಮ್ಯಾಕ
ಹ್ಯೋಳೋರ್ ಕ್ಯೋಳೋರ್ ಇಲ್ದಂಗಾಗೈತಿ ಅಲ್ವೇನಾ..?

ಯಾರಾನ ವಸಿ ಎಗ್ರಾಡ್ತಿದ್ರ
ಕಟ್ಟೆಮ್ಯಾಲ್ ಕೂತಜ್ಜ ಕುಂತಲ್ಲೆ ಹ್ಯೋಳಾನು
ನಣ್ಕರ್ಗೋವರ್ಗೂ ಎಗ್ರಾಡ್ತಾನಷ್ಟೆಯ
ಎಗ್ರಾಡ್ದೋನ್ ಕುಕ್ರುಬಡ್ಲೆಬೇಕನ್ನನು ಕನ..!

ಗಾದಿಮಾತಲ್ಲೆ ನೀತಿ ಹ್ಯೋಳಾರು
ನಡಿ..ನುಡಿ ತಿದ್ ತೀಡರು
ತಡುದ್ ನಡುದ್ರ ಬದ್ಕು ಹದ ಅನ್ನರು
ಆತ್ರುಗೆಟ್ರ ಯಡ್ವಿ ಬೀಳ್ಲೇಬೇಕಲ್ವೆನಾ...?!?
-ಮಯಾಸ

Thursday 6 December, 2012

ಸರ್ಕಸ್ ನೋಡ್ತಾನೆ ಬೀದಿನಾಯ್ಗೆ ಪಲ್ಟಿ ಹೊಡ್ಸೋ ಪಿಲಾನು ಮಾಡವಿ

ಕೋಲೆ ಬಸ್ವುನ ನೋಡ್ಕಂಡ್
ಬುಡುಬುಡುಕೆ ಸವುಂಡು ಕ್ಯೋಳ್ಕಂಡ್
ಚಾಟಿ ಮಾರಮ್ಮುನ್ ವರ್ಸೆ ನೋಡ್ತಾನೆ
ದಿನ ದೂಡ್ಕಂಡ್ ಕಾಲ ಕಳ್ಯೋ ಕಾಲೊಂದಿತ್ತು..!

ಊರ್ಕೇರಿಲಿ ವರ್ಷುಕ್ಕೊಂದ್ 
ಶನ್ದೇವ್ರ ನಾಟ್ಕ ಆಡಾರು
ಹಬ್ಬುಕ್ಕೋ ಹುಣ್ಮೆಗೋ
ಚಕ್ಳುಗೊಂಬೆ, ಬಯ್ಲಾಟ ಆಡಾರ್ ಬರಾರು..!

ವಾರುದ್ ಸಂತೇಗೋದ್ರೆ
ಜನ ಗುಂಪ್ಸೇರ್ಕಡವ್ರಂದ್ರ
ಹಾವಾಡ್ಸೋನ್ ಹಾವಿನಾಟ
ಕೋತಿ ಸರ್ಕಸ್ಸು, ದೊಂಬ್ರಾಟ ನಡೀತಿರಾದು..!

ಜಾತ್ರೆ-ಸುಗ್ಗಿ, ಊರ್ಸೇವೆ-ಹರ್ಸೇವೆ ಬಂತಂದ್ರ
ಟೆಂಟಲ್ಲಿ ಕಂಪ್ನಿ ಸರ್ಕಸ್ಸು, ಕಂಪ್ನಿ ನಾಟ್ಕ
ಯಕ್ಷಗಾನ ಯೋನಾರೊಂದ್ ನಡ್ದೇ ನಡ್ಯೋದು
ಮನಿಂದಲೇ ಜಮ್ಕಾನನೋ ಚಾಪೆನೋ ಎತ್ಕಂದೋಗ್ಬೇಕಿತ್ತು..!

ಚಾಟಿ ಮಾರಮ್ಮುಗೆ ಕಾಳ್ಕಡ್ಡಿ ಕೊಡ್ಬೇಕಿತ್ತು
ಶನ್ದೇವ್ರ ನಾಟ್ಕ ನೋಡೋಕೋಗೋರು ಮಾಂಸ ಮಡ್ಡಿ ತಿನ್ತಿರ್ಲಿಲ್ಲ
ಸರ್ಕಸ್ ನೋಡ್ತಾನೆ ಬೀದಿನಾಯ್ಗೆ ಪಲ್ಟಿ ಹೊಡ್ಸೋ ಪಿಲಾನು ಮಾಡವಿ
ಇತ್ತಿತ್ಲಾಗೆ ಟಿವ್ಲಿ ದಾರ್ವಾಯಿ...ಮಾಲ್ಲಿ ಸಿನ್ಮಾ ನೋಡಂಗಾಗ್ಬುಟೈತೆ ಅಲ್ವೇನಾ...???
-ಮಯಾಸ

Monday 3 December, 2012

ಯೋಟ್ ಅಡ್ವಿದ್ರೂ ನೆರೆ ಹೊರೇರ್ ನೆಚ್ನಡ್ಯೋರು..!

ಅಯ್ಯಾ ಯೋಟ್ ಸಲೀಸು ಅಂತೀರಿ
ಎಂತದ್ ಬೆಳ್ಯದೂ ಹೂವೆತ್ತಿಟ್ಟಂಗಿರದು
ಕಾಸ್ ಇಸ್ಕಳ್ದಂಗೆ ಕೇಮೆ ಮಾಡ್ಕೊಡಾರು
ಎಲ್ರೂ ಮನಿ ಕೇಮೆಗೆ ಎಲ್ರೂ ಮುಯ್ಯಾಳೆ..!

ಎತ್ತಿರೋನು ಎತ್ ಮುಯ್ಯಾಳು
ಉಳೋಕ್ ಬರೋರ್ ಉತ್ಕೊಡಾರು
ಹೊರೆ ಹೊರಾರು ಹೊತ್ಕೊಡಾರು
ಬರೋ ಕೇಮೆನೆ ದಿನೂದ್ ಲೆಕ್ದಲ್ಲಿ ಮಾಡ್ಕೊಡಾರು..!

ಹೆಚ್ಬೂಮಿ ಇತ್ತೋ ಗುತ್ಗೆಕೊಡಾರು
ಬೂಮ್ನನ್ದೆ ಯೋನಾರ ಬೆಳ್ಕೋ-ಬೆಳ್ಬಂದ್ಮೇಕೆ
ಬಂದುದ್ರಲ್ ಇಟ್ಕಂಡ್ ವಸಿ ಕೊಡನ್ನರು
ಬೆಳಿ ಕೈಕೊಟ್ರ ಮುಂದಿನ್ವರ್ಷ ಸೇರ್ಸ್ ಕೊಡನ್ನರು..!

ಒಬ್ರುನೊಬ್ರೂ ಯೋಟ್ ನಂಬರಲ್ವೇನಾ...???
ನಿನ್ಮನಿ ಬದ್ಕಿಗೆ ಜತಿಗ್ ನಾ ಇರ್ತೀನನ್ನೋರು
ಇಲ್ದೋರ್ಬಗ್ಗೆ ಕೈನೀಡ್ ಕೊಡಾರು
ಯೋಟ್ ಅಡ್ವಿದ್ರೂ ನೆರೆ ಹೊರೇರ್ ನೆಚ್ನಡ್ಯೋರು..!

ಬೆಳ್ದ್ ಬೆಳೆಯ ಹಂಚ್ಕಂಡ್ ತಿನ್ನಾರು
ಬೆಳಿಗ್ಬೆಳೇನೆ ಬದ್ಲಾಯ್ಸಕೊಳ್ಳಾರು
ಈಗೆಲ್ವೂ ಬದ್ಲಾಗೈತೆ ಮನುಷ್ರ ಮನುಷ್ರೇ ನಂಬಾಕಿಲ್ಲ
ಮನ್ಸ್ ಮನ್ಸೇ ಚೆಟ್ಟೋಗೆವೆ ಅಲ್ವೆನಾ...?!?
-ಮಯಾಸ