Saturday 20 October, 2012

ಇದ್ಕಿಂತ ಬ್ರೇಕಿಂಗ್ ನ್ಯೂಸ್ ಬೋಕೆನಾ...?!?



ಹಳ್ಳಿಜನುಕ್ಕೆ
ದಿಣ್ನೆ ಹತ್ತಿ-ದಿಣ್ಣೆ ಇಳ್ದ್ರೆ
ಏರುಸ್ರೂ-ಇಳುಸ್ರೂ ಬತ್ತದೆ
ದ್ಯಾನಪಾನ ಬೇಕಿಲ್ಲ..!

ವನ್ಕೆ ಎತ್ತಾಡಿ 
ವಳ್ಳುಕ್ಕಾಕಿ ಬತ್ತ ಕುಟ್ಟುದ್ರೆ
ಕಾಲಿಂದ ತಲಿತನ್ಕ
ವ್ಯಾಯಾಮಾತ್ತದೆ..!

ಕೊಡ್ಲಿ ತಗಂಡ್
ಮಣ್ಗಟ್ಲೆ ಸೌದೆ ವಡ್ದ್ರೆ
ಜಿಮ್ಮು ಪಮ್ಮು ಬೇಕಿಲ್ಲ
ಮೈಕೈ ಕಟ್ಮಸ್ತಾಗಿರ್ತದೆ ಕನ..!

ಮಳ್ಬತ್ತದ..? ಬೆಳೇನಾತದೆ
ಸಣ್ಣೊರ್ -ದೊಡ್ಡೋರ್ ಅಳ್ಯಕ್ಕೆ-
ತಿಳ್ಕಳಕ್ಕೆ, ಪ್ಯಾಪರ್ ವೋದ್ಬೇಕಿಲ್ಲ
ಮೂರ್ಖುರ್ ಪೆಟ್ಗೆ ನೋಡ್ಬೇಕಿಲ್ಲ ಕನ..!

ಹಳ್ಳಿಲಿ-ಡಿಲ್ಲಿಲೆನಾಯ್ತದೆ ಎಲ್ಲದ್ನು
ಊರ್ ಕಟ್ಟೆಲಿ ಹಿರಿಕ್ರು
ಕವ್ಡೆ ಬುಟ್ಟಂಗ್ ಹ್ಯೋಳ್ತಾರ್ಕನ..!
ಇದ್ಕಿಂತ ಬ್ರೇಕಿಂಗ್ ನ್ಯೂಸ್ ಬೋಕೆನಾ...?!?

-ಮಯಾಸ

No comments:

Post a Comment