Saturday 20 October, 2012

ಹಿಂದ್ ಮುಂದ್ ನೋಡ್ಲಿಲ್ಲ ಚಕ್ಬಂದಿ ನಟ್ಬುಟ್ಟೆ..!

ವಾರೆ ನೋಟುಕ್ ಮನ್ಸೋತೆ
ಹಾಲ್ಟಲ್ಲಿ ಠಿಕಾಣಿ ಹೂಡಾಕೆ
ಹಕ್ಪತ್ರ ಬೇಕಂದ್ಲು
ಸಾಗೋಳಿ ಚೀಟಿ ಬರ್ಕೊಟ್ಬುಟ್ಟೆ...!

ಊರಿಗ್ ಬಂದೋಳ್ 
ನೀರ್ಗೆ ಬರ್ದಿರ್ತಳ...?
ಪಿರೂತಿಯ ನರ್ಕೆಮನೆ ಆಸ್ಪಟ್ಲು
ಕಟ್ಕೊಬುಡತ್ಲಗೆ ಅಂದ್ಬುಟ್ಟೆ...!

ಅವ್ಳ ಮುಸಿಮುಸಿ ನಗೂಗೆ
ಮನ್ಸ್ಪೂರ್ಕಾಗಿ ಮರ್ಳಾಗಿ
ನಂಗೂ ನೆರ್ಳಾದಂಗಾತದೆ ಅನ್ಕಂಡು
ಮಂಜ್ರಾತಿ ಆದೇಸ ಕೊಟ್ಬುಟ್ಟೆ...!

ಅದೆಂಗಾತೋ ನಾಕಾಣೆ
ಎಂಡ್ ಮನ್ಸೂ ಕೂಡ್ಕಂಡ್ವು
ಹಿಂದ್ ಮುಂದ್ ನೋಡ್ಲಿಲ್ಲ
ಚಕ್ಬಂದಿ ನಟ್ಬುಟ್ಟೆ..!

ಸರ್ವೆ ನಂಬ್ರು ಸಿಕ್ಬುಟ್ತು
ಪಾಣಿ ತೆಗ್ದ್ಕೊಟ್ಬುಟ್ಟೆ
ಮತ್ಯಂತ ಮಾಡದು ಕನ
ಜಂಟಿಖಾತೆ ಮಾಡ್ಸ್ಬುಟ್ಟೆ !!!

-ಮಯಾಸ

No comments:

Post a Comment