Monday 6 May, 2013

ಯಂಡ್ ಕೋಲಿನಾಟಲ್ಲ ಕನ

ವಂದಡಿ ದಾಂಡ್ ಹ್ಯಿಡ್ಕಂಡ್
ಯಂಡ್ಕಡೆ ಚೂಪ್ಮಾಡಿದ್ ಗಿಲ್ಲಿ ಇಟ್ಕಂಡ್
ರಡೇ..ವನ್ ಟೂ ತ್ರೀ ಅನ್ನದೇ ತಡ
ಬೀಸ್ ಅಂದ್ಕೂಡ್ಲೆ ಬೀಸಿರೆ ಚಿನ್ನದಾಂಡ್ ಆಟ ಅಲ್ವೆನಾ..?

ಚೂಪಾದ್ ಗಿಲ್ಲಿ ಮುಂದ್ಕೆ
ದಾಂಡ್ ಕುಟ್ಟಿ...ಗಿಲ್ಲಿ ಎಗ್ರಿದ್ಕೂಡ್ಲೆ
ಗಾಳಿಲ್ ಮೂರ್ಸಲ ತಾಕ್ಸಿ ಗಿಲ್ಲಿ ಅನ್ನವಿ
ಗಿಲ್ಲಿ ಎತ್ ಬೀಸ್ವಡ್ಯವಿ-ಆಟುಳ್ಕಳದಲ್ವೆನಾ...
ಚಿನ್ನಿದಾಂಡ್ ಆಟುದ್ ಮಜಾನೆ ಮಜ ಅಲ್ವೆನಾ..?

ಇಸಾಲ್ವದ್ ಬಾರೆಮ್ಯಾಗೆ
ಆಟುದ್ ಮೈದ್ವಾನದಾಗ್
ಮನಿ ಮುಂದಿನ್ ಅಂಗ್ಳುದಾಗ
ಚಿನ್ನಿ-ದಾಂಡ್ ಇಟ್ಕಂಡು
ಯೋಟ್ ಚಂದುಕ್ಕಾಡವಲ್ವೆನಾ..?

ಚಿನ್ನಿದಾಂಡಂದ್ರೆ

ಯಂಡ್ ಕೋಲಿನಾಟಲ್ಲ ಕನ
ಚಿನ್ನಿತೂರಕ್ಕೆ ತೋಳಿನ್ ಶಕ್ತಿ ಬಳ್ಸವಿ
ಚಿನ್ನಿ ಯತ್ಬೇಕಾರೆ ನಾಜೂಕಾಗಿರವಿ
ಹದ್ಕಣ್ ಬುಟ್ಟೋರ್ ತಪ್ಸಿ ಅಟಾಡವಿ
ಚಿನ್ನಿದಾಂಡ್ ಆಟಂದ್ರೆ ದೌಡೋಡಗವಿ ಅಲ್ವೆನಾ..?

---ಮಯಾಸ

No comments:

Post a Comment