Monday 12 November, 2012

ಸವುಂಡ್ ಮಾಡದು ಬಂಡಾಯ್ದ್ ಸೂಚ್ನೆ ಅಲ್ವೇನಾ..?

ಸರ್ಪಾಟಕಿಯಂತ್ ಕನ್ಸ್ಗಳ್ 
ಹನ್ಮಂತನ್ ಬಾಲ್ದಂಗೆ
ಸರ್ಸರ್ನೆ ಉರ್ದೋದಂಗೆ
ನನ್ಸಾಗ್ಬೇಕನ....!

ಮೂಲೆ ಪಟಾಕಿಯಂಗೆ
ಮನ್ಸಿನ್ ಮೂಲೆಲಿರೋ
ಬಯ್ಕೆಗಳು ರಪ್ ರಪ್ಪನೆ
ಹೂವಿನ್ಕುಂಡ್ದಂಗೆ ಚುಮ್ತಿವೆಕನ..!

ಅನ್ಕಂಡಿದ್ ಆಗಾದಾದ್ರೆ
ಬಯ್ಸಿದ್ ಬರೋದಾದ್ರೆ
ಹಿಂದ್ ಮುಂದ್ ನೋಡಲ್ಲ ಕನ
ಆಕಾಶ್ಕೊಂದ್ ರಾಕೇಟ್ ಹಾರ್ಸದೆ ಕನ...!

ಚಿಕ್ಕೋನಿದ್ದಾಗ ಜಜ್ಜ ಪಟಾಕಿ ಕಲ್ಲಲ್ಲಿ ಜಜ್ಜುತಿದ್ದೆ
ಸ್ವಲ್ಪ್ ದೊಡ್ಡೋನಾದ್ಮೆಲೆ ಪಟಾಕಿ ಹಬ್ ಬಂದ್ರೆ
ಪಟಾಕಿ ಹೊಡ್ಯೋ ಕೋವಿ ಕ್ಯೋಳಿ ಪೆಟ್ತಿಂದ್ ನೆನ್ಪೈತಿ
ಈಗ್ ಬುಲೆಟ್ಟಾಕೋ ಕೋವ್ಗಳೇ ಬೇಕಾರು ಸಿಗ್ತಾವಲ್ವೇನಾ..?

ಈರುಳ್ಳಿ-ಬೆಳ್ಳುಳ್ಳಿ ಪಟಾಕಿ ಕಾಲೋಗಿ
ಲಕ್ಷ್ಮಿಪಟಾಕಿ-ಆನೆಪಟಾಕಿ-
ಆಟಂಬಾಂಬ್ ಕಾಲ್ಬಂತು ಅಲ್ವೇನಾ..?
ಸವುಂಡ್ ಮಾಡದು ಬಂಡಾಯ್ದ್ ಸೂಚ್ನೆ ಅಲ್ವೇನಾ..?
--ಮಯಾಸ

No comments:

Post a Comment