Tuesday 27 November, 2012

ವಳ್ದಾರಿಲಿ ನಡ್ಯೋರ್ ಅಲ್ವೇನ..?

ಎತ್ತಿನ್ ಗಾಡಿಲಿ 
ಎಲ್ಗಾರ ಹೋಗೋ ಕಾಲ್ದಲ್ಲಿ
ನಡ್ಕಂಡ್ ಹೋಗೋರು
ವಳ್ದಾರಿಲಿ ನಡ್ಯೋರ್ ಅಲ್ವೇನ..?

ಶಿಳ್ಳೆ ಹಾಕಂಡ್ ನಡ್ಕಂಡ್ ಹೊಂಟ್ರೆ
ಕಾಡಣ್ಣು ತಿನ್ನಕ್ ಸಿಗಾವು
ಜರಿತ್ವರೆ ನೀರ್ ದಾವ್ ಇಂಗ್ಸಾದು
ಹಕ್ಕಿಗಳ್ ಚಿಲಿಪಿಲಿ ಸದ್ ಕಿವಿಗ್ಬೀಳದು..!

ಈಗೆಲ್ಲ ಹಂಗಿಲ್ ಬುಡತ್ಲೆಗೆ
ಎಕ್ಕಡಿಕ್ ಹ್ವಾಗ್ಬೇಕಂತ್ ಗೊತಿದ್ರಸಾಕ್
ಯೇನಾರ ಸಿಗ್ತಾವೋ, ಹ್ವಳ್ಳಾಡ ಹೊತ್ಗೆ
ಯಕ್ಕಡಿಕ್ ಹೋಗ್ ಯತ್ಲಾಗ್ ಬಂದ್ವೋ ತಿಳಿವಲ್ದು..!

ಮನುಸ್ರು ನಡ್ಯೋ ದಾರ್ಯಾಗ
ಗರ್ಕೆ ಹುಲ್ಲು ಬೆಳಿತಿರ್ಲಿಲ್ಲ ಗೊತ್ತೇನ..?
ಇತ್ತಿತ್ಲಾಗೆ ವಳ್ದಾರಿಗಳು ರಹದಾರಿಗಳಾಗ್ಯಾವ
ಆದ್ರಿಲ್ಲಿ ತಲೀಲ್ ನಡ್ಯೋರ್ ನಡ್ಯಾಕ್ ಹತ್ಯಾರ...!

ರಾತ್ರಾದ್ರ ದಂದೆ ನಡುಸ್ತಾರ
ಹಗ್ಲೊತ್ತೆ ದರೋಡೆ ಮಾಡ್ತರ..!
ನೋಟ್ಕೊಟ್ ವೋಟ್ ತಕ್ಕಂಡ್
ಜನ್ಸೇವೆ ಮರ್ತು ಅವ್ರುಸೇವ್ಗೆ ಮುಂದಾಗ್ಯಾರ..!

ಖಾಕಿ, ಕಾವಿ, ಕಾದಿ, ಕರಿ ಧಿರಿಸಾಕ್ದೋರು
ಜೈಲ್ಪಾಲಾಗ್ತಾ ಬಿರ್ಯಾನಿ ಬಿಕ್ಷೆ ಬೇಡಾಕತ್ಯಾರ
ವಳ್ದಾರಿಲಿ ವಳ್ಳೇರ್ ನಡ್ಯೋ ಕಾಲೋಗಿ
ಕಳ್ರು..ಮೋಸ್ಗಾರ್ರು ಮೆರ್ಯಾಕ್ ಹತ್ಯಾರಲ್ವೇನಾ....?
-ಮಯಾಸ

No comments:

Post a Comment