Tuesday 25 June, 2013

ಬ್ರೇಕಿಲ್ಲುದ್ ಬೇರಿಂಗ್ ಗಾಡಿ

ಮಳುದ್ದುದ್ ಮೂರ್ ಕೋಲ್ ಮುರ್ಕಾಬಂದ್
ಮೂರ್ಕೋಲ್ನು ಮೂರ್ಮೂಲ್ಯಾಗ್ ಸೇರ್ಸಿ
ಚೂಪಾದ್ ಮಳಿಂದ ಕಲ್ಲಲ್ ಜಜ್ಜಿ...ಕೂಡ್ಸಿ
ಮೂರ್ಮೂಲ್ಗೂ ಒಂದೊಂದ್ ಬೇರಿಂಗ್ ಹಾಕಿ
ಇಳ್ಜಾರಲ್ ಹೆಂಗ್ ಜಾರೋಗವಿ ಅಲ್ವೆನಾ...??


ಸೈಕಲ್ ಸರ್ಮಾಡೋ ಅಂಗ್ಡಿಗೋಗಿ
ಮೂರೇಮೂರ್ ಬೇರಿಂಗ್ಗೆ
ದಿನ್ವಿಡಿ ಮೂರೊತ್ತು ಅಲ್ದಾಡವಿ
ಬರೇ ಮೂರೇ ಮೂರ್ ಬೇರಿಂಗ್ ಸಿಕ್ರೆ
ಮುಕ ಅರುಳ್ಸ್ಕಂಡ್ ಬೇರಿಂಗ್ ಗಾಡಿ ಮಾಡಾಕವಿ..!

ಬ್ರೇಕಿಲ್ಲುದ್ ಬೇರಿಂಗ್ ಗಾಡಿ
ಜಾರ್ಜಾರ್ತನೇ ಉಲ್ಟೋಗ್ಬುಟ್ರೆ
ಮೈಕೈ ತರ್ಚೋಗದು..ಮಂಡಿಗ್ ವಸಿ ಪೆಟ್ಟಾಗದು
ಪೆಟ್ಟಾತು ಅಂತ್ ಮನಿಗೋದ್ರೆ ಪೆಟ್ ಬೀಳ್ತವಂತ್ಲೇ...
ಅಡ್ಕಿನ್ ಸ್ವಪ್ ರಸ ಹಿಂಡ್ಕಂಡು ತರ್ಚಿದ್ ಗಾಯನು ಅಡುಗ್ಸವಿ ಅಲ್ವೆನಾ..?

ಸಮ್ತಟ್ಟಾದ್ ಬಾರೆಮ್ಯಾಗೆ
ಇಳ್ಜಾರಿನ್ ಕಾಲ್ದಾರ್ಯಾಗೆ
ಬೇರಿಂಗ್ ಗಾಡಿಲ್ ಜಾರ್ಜಾರ್ತನೆ
ಅಟಾಡ್ಕಂಡ್ ಇರ್ತಿದ್ದೋರು ದೊಡ್ಡೋರಾಗ್ಬುಡವಿ
ದಡ್ರು ಯಾರಾರ ಸಿಕ್ರೆ ಜಾರಿದ್ ಗಾಡಿನ ಮ್ಯಾಕೆ ಹ್ವತ್ಕಬರ್ಸವಿ..!

ಬೇರಿಂಗ್ ಗಾಡಿ ಅಟಾಡಕ್ಕೆ
ಅವಾಗ್ಲೆಲ್ಲ ತಳ್ಳಕ್ ಯಾರ್ನಾರ ಹುಡ್ಕಾಡವಿ
ಇವಾಗ್ ನೋಡ್ರೆ ಸುಮ್ಕೆ ನಿಂತ್ಕಂದ್ರೆ ಸಾಕು ಕನ
ಯಾರ್ ತಳ್ಳಿರು..ಯಾಕ್ ತಳ್ಳಿರು ತಿಳ್ಯಕುಲ್ಕನ
ಅದ್ಕೆ ಅಲ್ಲೆನ ಹಿರಿಕ್ರು ಹ್ಯೋಳ್ತಿದ್ದು ಮೈಯೆಲ್ಲ ಕಣ್ಣಾಗಿದ್ರೆ ಬದ್ಕು ಅಂತಲ್ವೆನಾ..?!?

--ಮಯಾಸ

No comments:

Post a Comment