Saturday 15 December, 2012

ಅವ್ರವ್ರ್ ವಗ್ಟ್ ಅವ್ರವ್ರೆ ಬಿಡ್ಸ್ಕ ಬ್ಯೋಕಲ್ವೇನಾ...?!?


ಜಗ್ಲಿ ಮ್ಯಾಲೋ... ವಟಾರ್ದಲ್ಲೋ
ಪುರ್ಸೊತ್ಮಾಡ್ಕಂಡ್ ಕುಕ್ರಬಡ್ಕಂಡ್
ವಗಟೇಳ್ಕಂಡ್  ವಗುಟ್ಬಿಡ್ಸ್ಕಂಡ್
ಬುಲ್ಡೆಗೆ ಕೆಲ್ಸಕೊಡ್ತಿದ್ವು ಅಲ್ವೇನ...?

ಆಕಾಶುದ್ ಮದ್ಯುದಲ್ ಕಪ್ಚುಕ್ಕಿ ಅಂದ್ರೆ
ಓಹೋಹೋ ನಂಗೊತ್ತಾತು ಕಣ್ಣು ಅನ್ನವಿ
ವಗ್ಟೇಳೋದ್ರಾಗ ಎತ್ತಿದ್ ಕೈ ಅನ್ನೋರ್ಗೆ
ಉತ್ರುವೇ ಇಲ್ದ ವಗ್ಟೇಳಿ ಆಟಾಡ್ಸವಿ..!

ಯಾರ್ಯಾರ್ಗೋ ಕ್ಯೊಳಿದ್ ವಗ್ಟು
ಉತ್ರುವೇ ಸಿಗ್ದೇ..ಒಡಾಡ್ತಿರದು
ಕೆಲ್ವ್ ವಗ್ಟಂತು ಸಿಕ್ ಸಿಕ್ಕಾಗಿರಾವು
ಸಿಕ್ ಸಿಕ್ಕರ್ನೆಲ್ಲ ಕ್ಯೋಳಂಗಾಗದು...!

ಇತ್ತಿತ್ಲಾಗೆ ಬದ್ಕಿಗೆ ಬದ್ಕೆ
ವಗ್ಟಾಗ್ ಹ್ವಾಗಿರ್ಬೇಕಾರೆ
ವಗ್ಟ್ ಹ್ಯೋಳೋರೆ ಇಲ್ದಂಗಾಗೈತೆ
ಇನ್ ವಗ್ಟ್ ಬಿಡ್ಸಾರ್ ಯೊಲ್ಲಿಂದ ಬಂದಾರು..?

ದಿನ್ವಿಡಿ ಬಿಸಿಬಿಸಿಯಾಗಿರರು
ಬದುಕ್ ದೂಡಕ್ ಹೆಣ್ಗಾರ್ ನಡ್ವೆ
ಪುರ್ಸೊತ್ತನ್ನದೇ ವಗ್ಟಾಗಿರ್ಬೇಕಾರೆ
ಅವ್ರವ್ರ್ ವಗ್ಟ್ ಅವ್ರವ್ರೆ ಬಿಡ್ಸ್ಕ ಬ್ಯೋಕಲ್ವೇನಾ...?!?
  -ಮಯಾಸ

No comments:

Post a Comment