Thursday 6 December, 2012

ಸರ್ಕಸ್ ನೋಡ್ತಾನೆ ಬೀದಿನಾಯ್ಗೆ ಪಲ್ಟಿ ಹೊಡ್ಸೋ ಪಿಲಾನು ಮಾಡವಿ

ಕೋಲೆ ಬಸ್ವುನ ನೋಡ್ಕಂಡ್
ಬುಡುಬುಡುಕೆ ಸವುಂಡು ಕ್ಯೋಳ್ಕಂಡ್
ಚಾಟಿ ಮಾರಮ್ಮುನ್ ವರ್ಸೆ ನೋಡ್ತಾನೆ
ದಿನ ದೂಡ್ಕಂಡ್ ಕಾಲ ಕಳ್ಯೋ ಕಾಲೊಂದಿತ್ತು..!

ಊರ್ಕೇರಿಲಿ ವರ್ಷುಕ್ಕೊಂದ್ 
ಶನ್ದೇವ್ರ ನಾಟ್ಕ ಆಡಾರು
ಹಬ್ಬುಕ್ಕೋ ಹುಣ್ಮೆಗೋ
ಚಕ್ಳುಗೊಂಬೆ, ಬಯ್ಲಾಟ ಆಡಾರ್ ಬರಾರು..!

ವಾರುದ್ ಸಂತೇಗೋದ್ರೆ
ಜನ ಗುಂಪ್ಸೇರ್ಕಡವ್ರಂದ್ರ
ಹಾವಾಡ್ಸೋನ್ ಹಾವಿನಾಟ
ಕೋತಿ ಸರ್ಕಸ್ಸು, ದೊಂಬ್ರಾಟ ನಡೀತಿರಾದು..!

ಜಾತ್ರೆ-ಸುಗ್ಗಿ, ಊರ್ಸೇವೆ-ಹರ್ಸೇವೆ ಬಂತಂದ್ರ
ಟೆಂಟಲ್ಲಿ ಕಂಪ್ನಿ ಸರ್ಕಸ್ಸು, ಕಂಪ್ನಿ ನಾಟ್ಕ
ಯಕ್ಷಗಾನ ಯೋನಾರೊಂದ್ ನಡ್ದೇ ನಡ್ಯೋದು
ಮನಿಂದಲೇ ಜಮ್ಕಾನನೋ ಚಾಪೆನೋ ಎತ್ಕಂದೋಗ್ಬೇಕಿತ್ತು..!

ಚಾಟಿ ಮಾರಮ್ಮುಗೆ ಕಾಳ್ಕಡ್ಡಿ ಕೊಡ್ಬೇಕಿತ್ತು
ಶನ್ದೇವ್ರ ನಾಟ್ಕ ನೋಡೋಕೋಗೋರು ಮಾಂಸ ಮಡ್ಡಿ ತಿನ್ತಿರ್ಲಿಲ್ಲ
ಸರ್ಕಸ್ ನೋಡ್ತಾನೆ ಬೀದಿನಾಯ್ಗೆ ಪಲ್ಟಿ ಹೊಡ್ಸೋ ಪಿಲಾನು ಮಾಡವಿ
ಇತ್ತಿತ್ಲಾಗೆ ಟಿವ್ಲಿ ದಾರ್ವಾಯಿ...ಮಾಲ್ಲಿ ಸಿನ್ಮಾ ನೋಡಂಗಾಗ್ಬುಟೈತೆ ಅಲ್ವೇನಾ...???
-ಮಯಾಸ

No comments:

Post a Comment