Friday 20 September, 2013

ಕೆಡ್ವೋರೆ ಹೊಡ್ಯೋರು



ಸಣ್ ಐಕ್ಳಿಂದ ಹಿಡ್ದು
ದೊಡ್ಡೋರ್ವರ್ಗೂ
ಮನ್ಸಾರೆ ಆಡ್ತಿದಾಟ..!

ಗಂಡೈಕ್ಳು-ಹೆಣೈಕ್ಳು
ಯಾರಾರು ಸರಿ ಸೇರ್ಕಂಡ್
ಯಂಡ್ ಗುಂಪ್ಮಾಡ್ಕಂಡ್ ಅಟಾಡವಿ..!

ಒಂದೋಟ್ ಕಲ್ಲಿನ್ ಪಚ್ಚೆ
ಒಂದ್ರು ಮ್ಯಾಲೊಂದ್ ವಟ್ಟಿ
ಕೆಡ್ವಿ-ಕಟ್ಟೋ ಆಟ್ವೆ ಲಗೋರಿ ಅಲ್ವೆನಾ...?

ಜೋಡ್ಸಿದ್ ಕಲ್ಗೆ ಒಂದ್ಗುಂಪು
ಬಾಲಲ್ ಬೀಸ್ವಡ್ದು ಚದ್ರುಸದು
ಜೋಡ್ಸಕ್ಕೆ ಇನ್ನೊಂದ್ ಗುಂಪು ಪರ್ದಾಡದು..!

ಕಲ್ಚದ್ರುಸೋ ಗುಂಪಾಗಿದ್ರೆ
ಕಟ್ಟೋರ್ಕಂಡ್ರಾತಿರ್ಲಿಲ್ಲ
ಕಟ್ಟ ಗುಂಪಾಗಿದ್ರೆ ಚದ್ರುಸರ್ಕಂಡ್ರಾತಿರ್ಲಿಲ್ಲ..!

ಕಟ್ಟಾ ಗುಂಪರು ಬಾಲ್ಮುಟ್ಟಂಗಿರ್ಲಿಲ್ಲ
ಚದ್ರುಸೋ ಗುಂಪೋರೆ ಬಾಲಲ್ ಬಿಸ್ವಡ್ಯರು
ಬಾಲಿನೇಟ್ ತಿಂದೋರು ಆಟ್ದಿಂದ್ ಹೊರ್ಗುಳ್ಯರು..!

ಕೆಡ್ವೋರೆ ಹೊಡ್ಯೋರು
ಕಟ್ಟೋರ್ಮಾತ್ರ ಪೆಟ್ಟಿಗಂಜುದೆ
ಹರ್ಸಾಸ ಪಟ್ಟು ಕಟ್ಟೋಕ್ ಪರ್ದಾಡರಲ್ವೆನಾ..?

ಆಗಿನ್ ಲಗೋರಿ ಆಟ ನೆನುಸ್ಕಂಡ್ರೆ
ಬಾಲು-ಕಲ್ ಇಲ್ಲಷ್ಟೆಯಾ...ಇವಾಗ್ಲು ಹಂಗೆ ಅಲ್ಲೆನಾ..?
ಯೋನಾರು ಸರಿ ಕಟ್ಟೋರ್ಗೆ ಪೆಟ್ಟು ಅಲ್ವೆನಾ...?!?

--ಮಯಾಸ

No comments:

Post a Comment