Wednesday 10 July, 2013

ಸಿಲೇಟು ಬಳ್ಪ ಇಲ್ಲೇಇಲ್ಕನ



ಮರುದ್ ಪಟ್ಟಿಗೆ ಸಿಗ್ಸಿದ್
ಕಪ್ ಕಲ್ಲಿನ್ ಸಿಲೇಟು
ಸುಣ್ಣುದ್ ಬಳ್ಪ-ಬೆಣ್ಣೆ ಬಳ್ಪ
ಇವೀಟ್ ಇಟ್ಕಂಡೆ ಇಸ್ಕೂಲ್ಗೋಗವಿ...!

ಮೊದ್ಮೊಲ್ಗೆ ಬಳ್ಪ ಹಿಡ್ಕಂಡ್ರೆ
ಬೆಳ್ನೋವ್ ಬರದು
ಯಂಡ್ಕಡೆ ಬರ್ಯಂಗಿದ್ ಸಿಲೇಟಲ್ಲಿ
ಒಂದ್ಕಡೆ ಬರ್ಸರು-ಇನ್ನೊಂದ್ಕಡೆ ಬರ್ಕಬರಕ್ಯೋಳರು..!

ಇಸ್ಕೂಲ್ ಸುರಾಗಿ ಸ್ವತಂತ್ರ ದಿನಾಚರ್ಣೆ ಬಂದಾಗ
ಯೂನಿಪಾಮ್ ಹಾಕಬರ್ರೋ ಅನ್ನರು
ವೋದಕು ಅವೇ ಬಟ್ಟೆ ಆಡಕು ಅವೇಬಟ್ಟೆ
ವಾರ್ಕಳ್ಯೋದ್ರೊಳ್ಗೆ ಜಾರ್ಬಂಡೆ ಅಟಾಡಿ ಹರ್ಕೋಗಿರವು...!

ಹರ್ದೋದ್ ಕಡಿಕ್ಯೆಲ್ಲ ತ್ಯಾಪಾಕಿ ತ್ಯಾಪಾಕಿ

ಒಂದ್ ತರುದ್ ಬಟ್ಟೆ ಬಣ್ಬಣ್ಣುದ್ ಬಟ್ಟಾಗ್ಬುಡದು
ಕಳ್ಳಿ ಕರೆ, ಐಸ್ಕ್ಯಾಂಡಿ ಬಣ್ಣ ಬಟ್ಟೆಲ್ ಎದ್ ಕಾಣವು
ಸರ್ಟಿನ್ಜೋಬು-ಚಡ್ಡಿಜೋಬು ತೂತಾಗಿರವು..!

ಯಾರ್ಜೋಬ್ಗೆ ಕೈಯಾಕಿರು
ಗೋಲಿರವು ಇಲ್ಲ ಜಲ್ಲಿ ಕಲ್ಲಿರವು
ಪಾಟುದ್ ಕಡಿಕೆ ಮನ್ಸೆಲ್ಲಿರದಲ್ವೆನಾ
ಅಟಾಡಕ್ಕೆ ಹಾತ್ವರ್ಯವಿ ಅಲ್ವೆನಾ..?

ಅಟಾಡ್ಕಂಡೆ ಇದ್ರೆ ಮೂಟೆ ಹ್ವರಕ್ಕೋತ್ತೀರಿ ಅನ್ನರು
ಈಗಿನೈಕ್ಳು ಮೂಟ್ಮೂಟೆ ಪುಸ್ಕ ಹ್ವತ್ಕಂದೆ
ಇಸ್ಕೂಲ್ಗೋಗ್ಬೇಕು-ಅಟಾಡದ್ಬುಟ್ಟು ಮತ್ ಪಾಟುಕ್ಕೋಗ್ಬೇಕು
ಸಿಲೇಟು ಬಳ್ಪ ಇಲ್ಲೇಇಲ್ಕನ-ಬರುದ್ರೆ ಅಳ್ಸಕಾಗಲ್ಲಕನ..!

ಪೆನ್ನುಪೇಪರ್ರೆ ಹಿಡ್ಕಂಡ್ ಇಸ್ಕೂಲ್ಗೋತ್ತವೆ
ಅವೆಲ್ಡ್ ಬುಟ್ರೆ ಬದ್ಕೆ ಇಲ್ಲಂತವ್ಕನ...
ಅಳ್ಸಿಬರ್ಯೋಕಾಲ್ದಾಗ ಸೋತ್ ಗೆಲ್ತೀವನ್ನೊರಲ್ವೆನ..?
ಅಳುಸ್ದಂಗ್ ಬರ್ಯೋ ಇವಾಗ ಸೋತ್ ಕೂಡ್ಲೆ ಅಳ್ತಾರಲ್ವೆನಾ...?!?

--ಮಯಾಸ

No comments:

Post a Comment