Saturday 6 July, 2013

ಗಾಬ್ರಾಯ್ತದೆ ಕಣ್ಗಿ...!

ಇದ್ಕಿದ್ದಂಗೆ
ಹುಟ್ಟಿದ್ ಪಿರೂತಿ...

ನಾವ್ನಾವೆ ಹೆಣ್ಕಂಡ್
ನಂಬ್ಕೆ...

ಸುಖಾಸುಮ್ಕೆ
ಸೃಷ್ಟಿಸ್ಕಂಡ್ ವಿಶ್ವಾಸ...

ಮನ್ಸು ಬಯುಸ್ಬುಡ್ತಂತ
ಕಟ್ಕಂಡ್ ಕನ್ಸು..

ಇಲ್ದಂಗಾಗೋಗ್ಬುಟ್ರೆ
ಮಣ್ಣಂಗಟ್ಟಿ...

ಯಂತದೂ ಆಗಕುಲ್ಲ ಕಣ್ಗಿ..!

ಬೀಸೋ ಗಾಳಿ ನಿಂತೋದ್ರೆ
ಬೆಳ್ಕೇ ಬರದಂಗಾದ್ರೆ....?

ಕತ್ಲೇ ಆಗ್ದಿದ್ರೆ
ಮಳೇ ಹೂಯ್ದಿದ್ರೆ...?

ಹಿಂಗೆಲ್ಲ
ಊಹಿಸ್ಕಂಡ್ರೆ...

ಗಾಬ್ರಾಯ್ತದೆ ಕಣ್ಗಿ...!

--ಮಯಾಸ

No comments:

Post a Comment