Monday 29 July, 2013

ಜೊಳ್ಳು ಹಾರೋಗೆ ಹೋಯ್ತವೆ

ನಡ್ಯೋಕಾಲ್ ಯಡುವ್ದೆ
ನುಡ್ಯೋ ನಾಲ್ಗೆ ತೊದುಲ್ದೆ
ಇರಲ್ಲ ಕನ......!

ಯಾರೇಟೆ ಕಲ್ಕಿರು
ಹರ್ಯೋ ನೀರಿನ್ ಬೊಗ್ಡ
ತಿಳ್ಯಾಗೇ ಆಗುತ್ತೆ ಅಲ್ವೆನಾ....?

ಮೂಡಿದ್ ಸೂರ್ಯ ಮುಳುಗ್ದಂಗೆ
ಕಾಮುನ್ಬಿಲ್ ಮರ್ಯಾದಂಗೆ
ಕವುಚ್ಕಂಡ್ ಇಬ್ನಿ ಅವುಚ್ಕಂಡಂಗೆ..!

ತಾಳ್ದೋರು ಬಾಳ್ತಾರೆ
ಆತ್ರುಗೆಟ್ಟಾರು ಬುದ್ಗೆಟ್ಟಾರು
ಅಂತ್ ಸುಮ್ ಸುಮ್ಕೆ ಹ್ಯೋಳಿಲ್ಲ ಕನ..!

ಕಾಳುಜೊಳ್ಳಿನ್ ಕತಿಗ್ವತ್ತಲ್ವೆನಾ
ಗಾಳಿ ಬೀಸೆ ಬೀಸುತ್ತೆ ಕನ
ಜೊಳ್ಳು ಹಾರೋಗೆ ಹೋಯ್ತವೆ ಅಲ್ವೆನ...?!?

--ಮಯಾಸ

No comments:

Post a Comment