Monday 7 January, 2013

ಏಳ್ ಬೀಳ್ ಕಾಣ್ದಂಗೆ ಬಾಳಕ್ಕಾತದೆನಾ...?

ಹಡ್ಲೊಡಿವಾಗ ಬರುಲ್ಮೇಲೆ
ಪಲ್ಟಿ ಹೊಡುದ್ರೆ
ಮೈಕೈಯೆಲ್ಲ ಉರ್ದೋಗದು..!

ಮರ್ಕೋತಿ ಆಟಾಡ್ವಾಗ
ಸ್ವಲ್ಪ ಯಾಮಾರಿರೂ
ಮೂಳ್ಮೂರ್ಚೂರಾಗವು,,,!

ಹುಲ್ಲಿನ್ ಕೊಡ್ಬೆಗಳೇ
ಜಾರೋ ಬಂಡೆಗಳಾಗಿದ್ವು
ಹುಲ್ಕಂತೆನಡ್ವೆ ಅವುಚ್ಕೋತಿದ್ವಿ ಅಲ್ವೆನಾ..?

ನಾವ್ ಅಟಾಡಾಗ
ದೇಹೂ ದಣ್ಯದು
ಮನ್ಸು ಚುರ್ಕಾಗೋದು ಕನ..!

ಯುವಾಗಿನ್ ಐಕ್ಳು
ಬಿಟ್ಕಣ್ ಬುಟ್ಕಂಡೇ
ಪೋಗೋ ನೋಡ್ಕಂಡ್ ಕುಂತಲ್ಲೇ ಕುಕ್ರುಬಡಿತ್ವೆ...!

ವರ್ಸ್ಮೋರ್ ದಾಟಂಗಿಲ್ಲ
ಕಣ್ಣಿಗಾಜ್ ಸಿಗುಸ್ಗಾತವೆ
ಏಳ್ ಬೀಳ್ ಕಾಣ್ದಂಗೆ ಬಾಳಕ್ಕಾತದೆನಾ...?

ಮಾತ್ಬರಕ್ಕಿಂತ್ಮುಂಚೆನೇ
ಮೊಬೆಲಾಗ್ ಮಾತಾಡಕ್ ಸುರಾತವೆ
ರಿಮೋಟು-ಮೌಸ್ ಹಿಡ್ಕಂಡೆ ಅಟಾಡ್ತವಲ್ವೆನಾ..?
--ಮಯಾಸ

No comments:

Post a Comment