Monday 7 January, 2013

ಚ್ವಳಿಗೆ ಬರ್ಗಾಪಿ-ಬೇಸ್ಗಿಗೆ ನೀರ್ಮಜ್ಗೆ-ಮಳೇಲ್ ಬಿಸ್ನೀರು...!

ನನ್ನಜ್ಜಿ ನನ್ನವ್ವ ಗಂಟುಕಟ್ಟಿ ಕಟ್ಟುಗೆ ಮಾಡುತಿದ್ದ
ಕೆಸಿನ್ ಗಂಟಿನ್ ಪಲ್ಯದ ಘಾಟು ಕಾಡಾಕತೈತಿ
ಬಕ್ಕೆ ಹಲಸಿನಣ್ಣಲ್ಲಿ ಮಸ್ದು ಮಾಡ್ತಿದ್
ಹಲ್ಸಿನಣ್ಣಿನ್ ದ್ವಾಸೆ ತಿನ್ನೋಕ್ ಆಸಾಗೈತಿ ಕನ.. !

ಕಡುಡ್ ಹಿಟ್ಟಿಗೆ ಕಾಯ್ತುರ್ದಾಕಿ
ಹಬೇಲ್ ಬೇಯ್ಸಿ ಮಾಡ್ತಿದ್ ಕಾಯಿಟ್ಟು
ತಂಪಾಗ್ಲಂತ್ ಕೊಡ್ತಿದ್ ಮೆಂತ್ಯದಿಟ್ಟು
ಎರೆಹುಳ್ದಂಗ್ ಕಾಣ್ತಿದ್ ಸಾವ್ಗೆ ರುಚಿ ಮರ್ಯಾಕಾತದೇನ..?

ಕಳುಲೆ ಪಲ್ಯ...ಕೈ ರೊಟ್ಟಿ
ಅಣ್ಬೆ ಯಸ್ರು..ನೀರ್ಕಡ್ಬು
ಹಾಲೇಡಿಗೊಜ್ಜು..ಕಲ್ಲೇಡಿಕೊಂಬು
ಬೇಸ್ಗೆ ಕಾಲ್ದಲ್ ಕುಡಿತಿದ್ ರಾಗಂಬ್ಲಿ
ನಾಲ್ಗಿಗೂ ರುಚ್ಸೋದು ದೇಹ್ಕೂ ವಳ್ಳೇದಲ್ವೇನಾ...?

ಹಸು ಕರಹಾಕಿದ್ಗೂಡ್ಲೆ ಜೀಬ್ ಹಾಲಲ್
ಮಾಡ್ತಿದ್ ಗಿಣ್ಣ -ಕಾಯ್ಗಿಣ್ಣ
ಕುಸ್ಲಕ್ಕಿಲ್ ಮಾಡ್ತಿದ್ ಬೇಯ್ಸ್ಲಕ್ಕಿ
ಬಾಳೆಹಣ್ಣಿನ್ ಗಾರ್ಗೆ-ಅರ್ಸುಣುದ್ ಯಲಿಟ್ಟು
ಊರ್ಲುಗಡ್ಬು-ಕೈಯಿಟ್ಟು ತಿಂದ್ ವರ್ಷೊಂಬತ್ತಾದ್ವು ಕನ..!

ಅಕ್ಕಿಹಿಟ್ಟೋ-ರಾಗಿಹಿಟ್ಗೋ, ಗೋದಿಹಿಟ್ಗೋ-ಜ್ವಾಳುದಿಟ್ಗೋ
ಕಲ್ಸೋವಾಗೊಂದಿಷ್ಟ್ ಉಪ್ಪುನೀರಾಕಿ
ದ್ವಾಸೆ ಹಂಚಲ್ಲಿ ಸೊಂಯ್ ಅನ್ಸಿರೆ ಓಡ್ದೋಸಾಗದು
ಜತಿಗೊಂದಿಷ್ಟ್ ಬಡ್ಕಿನ್ ಪಲ್ಯ ಇದ್ರೆ ಅದ್ರು ಮಜಾನೆಬೇರಿತ್ತು
ಚ್ವಳಿಗೆ ಬರ್ಗಾಪಿ-ಬೇಸ್ಗಿಗೆ ನೀರ್ಮಜ್ಗೆ-ಮಳೇಲ್ ಬಿಸ್ನೀರು...!

ಇವಾಗ್ಲೆಲ್ಲ ಎಲ್ನೋಡ್ರಲ್ಲಿ ಪಿಜ್ಜಾ-ಬರ್ಗರ್ರು
ಡೆಜಾರ್ಟ್ಸ್-ಫಾಸ್ಟರ್ಸ್, ಜಕೂನಿ-ಡೋನಟ್, ಬಾರ್ಬೆಕ್ಯೂ
ಕಾಪಿಡೇಗೋದ್ರೆ ಕೆಪಸ್ಸಿನೋ-ಲ್ಯಾಟೀ, ಎಕ್ಷ್ಪ್ರೆಸ್ಸೋ
ಒಂದ್ಕೋಳಿ ದುಡ್ಗಿಂತ ಹೆಚ್ ಕೊಟ್ ತಿಂದ್ ಹ್ವಟ್ಟೆ ಕೆಡ್ಸ್ಕೊಳ್ಳೋ
ಕೆಎಫ್ಸಿ ಚಿಕನ್ನು....ಎಂತೆತವೋ ಬಂದೋಗ್ಬುಟ್ಟಾವೆ ಅಲ್ವೇನಾ...?!?
--ಮಯಾಸ

No comments:

Post a Comment