Tuesday 8 January, 2013

ಹಗ್ಲೊತ್ತೆ ಬದ್ಕಿಗೆ ಕತ್ಲು ಕವುಚ್ಕಂಡೈತಲ್ವೆನಾ...?

ತಿಂಗ್ಳುಬೆಳ್ಕಿರ್ದಿದ್ರೆ
ಕತ್ಲು ಕವ್ಕಂಡಿದ್ರೆ
ಹ್ವಂತೆಕಡ್ಡಿ ಹಚ್ಕಂಡ್
ಹಿಡ್ಕಂಡ್ ನಡ್ಯೋವಿ

ಕಾಡ್ಸವ್ರಕೆ ಸೊಂಟ್ದಲ್ಲೊಂದ್
ಕುಡ್ಗೋಲಿರದು
ಕರ್ಗತ್ಲೆಲೂ
ಒಂತರುದ್ ದೈರ್ಯಕ್ವಡದು..!

ಸಣ್ ಮಿಣ್ಕುಳ ಹಿಂಗ್ ಮಿಂಚ್
ಹಂಗ್ ಮಾಯ್ವಾದ್ರು
ನಡ್ಯೋದಾರಿ ಕಾಣ್ತೋಗದು,
ದಾರ್ಸಾಗಿದ್ ಗೊತ್ತಾತಿರ್ಲಿಲ್ಲ..!

ಹರ್ಯೋನೀರ್ ತಡ್ಗಟ್ಟಿ
ಕರೆಂಟ್ ಕಂಡಿಡುದ್ರು
ಜನ್ರೇಟ್ರು ಬಂದ್ವು..ಟಾರ್ಚು ಬಂದ್ವು
ಕೈಯಾಗಿನ್ ಮೊಬೈಲಾಗ ಬೆಳ್ಕ್ಬರಾಕ್ ಸುರಾತು..!

ಯೋನ್ ಬಂದ್ರೇನ...?
ಕತ್ಲು ನಡ್ವೆ ಬೆಳುಕ್ ಬಂತಷ್ಟೆಯ
ಯೋಟ್ ಬೆಳ್ಕಿದ್ರು ದಿಕ್ತೋಚ್ದಂಗಾಗೈತಲ್ವೆನಾ
ಹಗ್ಲೊತ್ತೆ ಬದ್ಕಿಗೆ ಕತ್ಲು ಕವುಚ್ಕಂಡೈತಲ್ವೆನಾ...?
--ಮಯಾಸ

No comments:

Post a Comment