Thursday 18 April, 2013

ರಮ್ಮೇ ರಾಮ್ಬಾಣ

ಬಾಡ್ ಬೇಯ್ದಿದ್ರೆ
ಪಪ್ಪಾಯ್ಕಾಯ್
ಯಂಡ್ ಹೋಳ್
ಕೂದಾಕ್ಬುಟ್ರೆ 
ಬಲ್ತ್ ಬಾಡು
ಪಟ್ ಅಂತ್ ಬೇಯ್ದೋಗದಲ್ವೆನಾ..?

ಪಪ್ಪಾಯ್ಕಾಯ್ಗು
ಜುಮ್ ಅನ್ನುದ್ ಬಾಡ್ಗೆ
ತೆಂಗಿನ್ಕಾಯ್ ಚಿಪ್ಪು
ಕರಾಮತ್ ತ್ವಾರ್ಸದು
ಹಂಗಾರು ಬೇಯ್ದಿದ್ರೆ
ರಮ್ಮೇ ರಾಮ್ಬಾಣ ಅಲ್ವೆನಾ..?

ಚನ್ನಾಗ್ ಬೇಯುದ್ ಬಾಡು 
ದೇಹುಕ್ ವಳ್ಳೆದಲ್ಲ
ಬೇಯ್ಸ್ ತಿನ್ನೊದೊಳ್ಳೆದ್ಕನ
ಬೇಗ್ ಬೆಯ್ಯುದ್ ಬಾಡ್ನ
ಬೇಯ್ಸೋಕ್ ಸಲ್ವಾಗಿ
ಯೋನೇನ್ ಮಾಡವಲ್ವೆನಾ..??


ಹೆಚ್ ಬೇಯ್ಸಕೋಗ್ವಾಗ
ಮುಂಚ್ಗೆ ಹಾಕಿದ್ ಉಪ್ಪು
ಹೆಚ್ಕಾಗ್ಬುಡ್ತಿತ್ಕನ
ಉಪ್ ಕಮ್ಮಿ ಮಾಡಕ್ಕೆ
ಉಪಾಯ ಹೆಂಗ್ಮಾಡವಿ ಗ್ವತ್ತೆನ
ಬಾಳೆದಿಂದ್ ಬಾಡ್ನೆಸ್ರಲ್ ಮುಳ್ಗಿಸ್ಬುಡವಿ ಕನ..!

ಹೆಸ್ರಿಗಷ್ಟೆ ಹಳ್ಳಿಜನ ಕನ
ಯಸ್ರು ಮಾಡದ್ರಲು ಯತ್ತಿದ್ಕೈ 
ಮಾಡಕ್ ಹೊಂಟಿದ್ನ
ಮಾಡ್ ತೀರವರ್ಗೂ
ತಿರ್ಗಿ ನೋಡ್ತಿರ್ಲಿಲ್ಲ ಅಲ್ವೆನ
ಅಕ್ಕುಲನ್ನದು ಯಾವ್ದೂ ಇಲ್ಲ ಅಲ್ವೆನ...?

--ಮಯಾಸ

No comments:

Post a Comment