Friday 22 March, 2013

ಸೋತೋರ್ಗೆ-ಬಿದ್ದೋರ್ಗೆ ಬಸ್ರಿಮರ ಮಾದ್ರಿ

ಮರುಕ್ಕೆ ಬೇರು...ಬೇರಿಗೆ ಮರ
ಮರಕ್ಕೆ ಬಳ್ಳಿ...ಬಳ್ಳಿಗೆ ಚಿಗ್ರು
ಯೋಟೊಂದ್ ಮುಖ್ಯ ಅಲ್ವೆನಾ...?

ಬೇರು ಕಾಣ್ಸಕಿಲ್ವಾದ್ರು ಮಜಂತಂದ್ರೆ
ಬೇರ್ ಅಲ್ಗಾಡಿರೆ ಮರುಳ್ಯಕಿಲ್ಲ ಕನ
ಬೇರಿಲ್ಲುದ್ ಮರ ಯಾವ್ದೂ ಇಲ್ಲ ಅಲ್ವೆನಾ..?

ಬಳ್ಳಿಗೆ ಹಬ್ಬಕ್ಕೆ ಮರ್ಬೇಕೆ ಬೇಕಾದ್ರುವೆ-
ಕೆಲ್ವು ಮರ್ಕೆ ಬಳ್ಳಿಂದ್ ಯೋಟ್ ಉಪ್ಯೋಗ ಗೊತ್ತೆನ
ಬಳ್ಳಿ ವದ್ದೆ ಹೀರ್ಕಂಡ್ ಕೆಲ್ವು ಮರ ಬದುಕ್ತವೆ ಕನ..!

ಬಳ್ಳಿಗಳಿದ್ ಮರ್ಕೆ ಕೀಟಕ್ರಿಮಿ ಸುಲುಬುಕ್ ಹತ್ತಲ್ಲಲ್ವೆನ.-
ಬೇರ್ ಕಳುಚ್ಕಂಡ್ ಮರ ಮತ್ತುಟ್ಟೋದ್ ಅಪ್ರೂಪಕನ
ಬಳ್ಳಿ ಜತಿಗೆ ಮರ್ಬಿದ್ದೋದ್ರು ಬೇರಿಂದ ಮತ್ಬಳ್ಳಿ ಚಿಗ್ರುತ್ತೆ ಕನ..!

ಮರ್ಕಿಂತ ಮರ್ದೊಡ್ಡವಿರ್ತಾವ್ಕನ
ಬೇರ್ಗಿಂತ ಬೇರ್ ಗಟ್ಟಿ ಇರ್ತವಂತಲ್ವೆನಾ
ಚಿಗ್ರೋಕ್ ಸುರಾದ್ರೆ ಬಳ್ಳಿ..ತಡ್ಯಾಕಾತದೆನಾ..???

ಬಸ್ರಿ ಮರುದ್ ಕಥಿ ಗೊತ್ತೆನ...
ಬಸ್ರಿ ಮರ್ಮಾತ್ರ ಬಿದ್ರೂ ಬುಡ್ದಿಂದ ಮತ್ಚಿಗ್ರುತ್ತೆ ಕನ..
ಸೋತೋರ್ಗೆ-ಬಿದ್ದೋರ್ಗೆ ಬಸ್ರಿಮರ ಮಾದ್ರಿ ಅಲ್ವೆನಾ...?!?

--ಮಯಾಸ

No comments:

Post a Comment