ಕಿಂಯ್ ..ಕಿಂಯ್..ಕಿಂಯ್ಗುಡೋ
ಗುಬ್ಬಚ್ಚಿ ಸುಳ್ವಿಲ್ಲ-ಸಬ್ದಿಲ್ಲ
ಕಟ್ಟೋ ಮನಿಗೆ ಸೂರಿರಕಿಲ್ಲ
ಗುಬ್ಬಚ್ಚಿ ಗೂಡೆಲ್ಲಿಂದ ಬಂದಾವಲ್ವೆನ..???
ಗೊಡ್ಕಟ್ಟಕೆ ಹುಲ್ಕಡ್ಡಿ ಬೇಕಲ್ವೆನಾ
ಕಂತಿ ಹುಲ್ ಕೊಳ್ಳಾಕಾತದೆನಾ..??
ಹಿತ್ಲಿಲ್ದಂಗೆ-ಅಂಗ್ಳಿಲ್ದಂಗೆ ಇರೋರ್ ನಡ್ವೆ
ಹುಲ್ಕೊಡ್ಬೇ ಇದ್ರೆ ತಾನೆ -ಹುಲ್ಕಡ್ಡಿ ಅಲ್ವೆನಾ...??
ಮಸಾಣ್-ಮಸಾಣ್ನೆ ಇಲ್ದಂಗ್ಮಾಡಿ
ಸತ್ತೋರ್ನ ಕರೆಂಟಲ್ಸುಟ್
ಬೂದಿ ಮಾಡ ಕಾಲ್ದಲ್ಲಿ
ಗುಬ್ಬಚ್ಚಿ-ಗುಬ್ಬಚ್ಚಿಗೂಡ್ಗೆ ಉಳ್ಗಾಲೆಲ್ಲಿಂದ್ಬಂತೋ..?
ನೋಡ್ತ್ ನೋಡ್ತನೇ
ಸಾಗುರ್ದಂಡಿಲಿ ಅಲ್ಬಂದೋದಂಗೆ
ಗುಬ್ಬಚ್ಚಿನು ಅದ್ರು ಗೂಡುವೆ
ಅಪ್ಪಚ್ಚಿ ಆಗೋಗ್ಬುಟ್ವಲ್ವೆನಾ..?!?
--ಮಯಾಸ
No comments:
Post a Comment