Thursday 28 March, 2013

ವರ್ಷ್ಕೊಂದಿನ್ಮಾತ್ರಲ್ಲ ಕನ

ಕೆಸ್ರುಗದ್ದೆಲ್ ನಾಟಿ ಮಾಡೋರ್ಗೆ
ತ್ವಾಟ್ದಲ್ ಅಗ್ತೆ ಮಾಡೋರ್ಗೆ
ಹಳಹ್ವಡ್ಯೋರ್ಗೆ-ಕಾಡ್ಕೊಚ್ಚೋರ್ಗೆ-

ಕಟ್ಟುಡ-ಬಂಗ್ಲೆ-ಮಾಲ್ ಕಟ್ಟಕೆ
ಬಾಂಡ್ಲಿಲಿ ಸಿಮೆಂಟ್ ಹ್ವತ್ಕಡೋರ್ಗೆ
ಇಟ್ಗೆ ಕಬ್ಣ ಯತ್ಕೋಡೋರ್ಗೆ -

ಸಂಡಾಸ್ಗುಂಡಿ ಕಿಲೀನ್ ಮಾಡಾರ್ಗೆ
ಚರಂಡಿನೋ...ರಸ್ತೆನೋ ಗುಡ್ಸೋರ್ಗೆ
ಮೈಬಗ್ಸಿ ಕೈಕಸ್ಬು ಮಾಡೋರ್ಗೆ-

ಅಂದುದ್ ಮನಿಗೆ ಚಂದುಕ್ ಬಣ್ಣ ಬಳ್ಯೋರ್ಗೆ
ಬಿಸ್ಲಲ್ ಬೆವುತ್ಕಂಡ್ ದುಡ್ಮೆ ಮಾಡೋರ್ಗೆ
ಕಾರ್ಕಾನೆ ಹ್ವಗೆ ಪೈಪಲ್ ವದ್ದಾಡೋರ್ಗೆ-

ಹ್ವತಿನ್ ಅನ್ನುಕ್ಕಾಗಿ ಮ್ವೂಟೆ ಹ್ವರೋರ್ಗೆ
ಜೀವ್ನುಕ್ಕಾಗ್ ಜೀತ ಮಾಡಾರ್ಗೆ
ಬಣ್ಣುದ್ ಬದ್ಕು ಕಂಡು ಬೆಪ್ಪರಬೆರ್ಗಾಗೋರ್ಗೆ-

ವಾರಾನ್ ಯೋಳ್ ದಿನಾನೂ
ವರ್ಷಾನ್ ಹನ್ನೆಲ್ಡ್ ತಿಂಗ್ಳೂ
ದಿನುದ್ ಇಪ್ಪತ್ನಾಕ್ ಗಂಟ್ಯೆನೂ-

ಮೈಗಂಟಿದ್ ಬೆವ್ರು-ಬಟ್ಗಂಟಿದ್ ಕಲಿ
ದೇಹ್ಕು-ಮನ್ಸ್ಗೂಆದ್ ನೋವ್ನ
ಮಂಗೋಕ್ ಮುಂಚ್ಗೆ ತೊಕ್ಕಂದ್ ಮಂಕಳ್ಳೋರ್ಗೆ-

ವರ್ಷ್ಕೊಂದಿನ್ಮಾತ್ರಲ್ಲ ಕನ
ಪ್ರತೀ ಕ್ಷಣ್ವೂ ಹೋಳಿ ಹಬ್ವೇ ಅಲ್ವೆನಾ..?!?

--ಮಯಾಸ

No comments:

Post a Comment