Saturday 16 March, 2013

ಮಗ್ಲು ಬದ್ಲಾಯ್ಸಂಗೆ...

ಕತ್ಲೋದ್ ಮ್ಯಾಲ್ 
ಬರೋ ಬೆಳ್ಕಂಗೆ-
ಕಷ್ಟೋಗಿ ಸುಖ 
ಅನ್ನೋದ್ ಬರಂಗಿದ್ದಿದ್ರೆ...

ಯೋಟ್ ಪಸಂದಾಗಿರದು ಅಲ್ವೆನಾ...?

ಸೂರ್ಯ ಹೋದ್ಕೂಡ್ಲೆ
ಚಂದ್ರ ಬರಂಗೆ-
ಅಳೋದ್ ನಿಲ್ಸೋಕೆ
ನಗು ಬರಂಗಿದ್ದಿದ್ರೆ...

ಯಂತ ಚಲೋ ಇರೋದಲ್ವೆನಾ...?

ಮಳ್ಗಾಲ..ಚಳ್ಗಾಲ..
ಬೇಸ್ಗೆಕಾಲ-
ವರ್ಷಾನ್ವರ್ಷ
ಮಗ್ಲು ಬದ್ಲಾಯ್ಸಂಗೆ...

ಬದ್ಕಲ್ಲೂ ಬ್ಯೋಕನ್ಸಿದ್ ಬರಂಗಿರ್ಬೇಕಿತಲ್ಲೆನಾ..?

-ಮಯಾಸ

No comments:

Post a Comment