Thursday 13 September, 2012

'ನೆಮ್ದ್ ಇಲ್ಲ'




-----ಅವಾಗ್ಲೆಲ್ಲ--- 
ನರ್ಕೆ ಮನಾದ್ರೂ ಸೈ
ಅರ್ತ್ ಬಾಳ್ಬೇಕು
ಅಂತನ್ನೋರು ನುರ್ತೋರು..!

ನುಚ್ಚನ್ನ ತಿನ್ನೋಕು
ಹಿಂಜರಿತಿರ್ಲಿಲ್ಲ ಕನ
ನೆಚ್ಕಂಡ್ ಬಂದವ್ರು..!

-----ಈಗ್ ನೋಡ್ರೆ---

ಮೆಚ್ಕಂಡ್ ಮದ್ವಾತರೆ
ವರ್ಷ ತುಂಬಂಗಿಲ್ಲ
ಕಚ್ಚಾಡ್ಕಂಡ್ ದೂರಾತಾರೆ..!

ದಿನ್ವಿಡೀ ದುಡಿತರೆ
ಹೊಟ್ತುಂಬ ತಿನ್ನಕ್ಕಿಲ್ಲ
ಮೈ ತುಂಬ ತ್ವಡಾಕಿಲ್ಲ....!

ಯೋನ್ ಇಲ್ದಿದ್ರೂ ಅವಾಗ್ ನೆಮ್ದಿತ್ತು ಕನ
ಈಗ್ ನೋಡ್ರೆ ನಂಬ್ಕೂ ಇಲ್ಲ ನೆಮ್ದೂ ಇಲ್ಲ ಅಲ್ವೇನಾ..?!?

-ಮಯಾಸ

No comments:

Post a Comment