Saturday 15 September, 2012

ದಿಕ್ ಹುಡ್ಕಿರೆ ಹೆಂಗ್ ಕಾಣ್ತದ..?



ಮಂಜ್ ಕವ್ಕಂಡ್ರೆ
ದಿಕ್ಕೇ ತೋಚ್ತಾ ಇರ್ಲಿಲ್ಲಕನ
ಮನ್ಸಿಗೆ ಮಂಕ್ ಬೂದಿ ಎರ್ಚ್ ಕಂಡು
ದಿಕ್ ಹುಡ್ಕಿರೆ ಹೆಂಗ್ ಕಾಣ್ತದ..?!?


ಹ್ವಳಿಗಾಕಿರೂ ಅಳ್ದಾಕು ಅನ್ನೋರು
ಈಗ್ನೂ ಅಳಿತ್ತಾರ್ ಕನ
ಆದ್ರಾ...
ಹ್ವಳಿಗಾಕಾಕೆ ಮನ್ಸೇ ಬರಾಕಿಲ್ಲಂತೆ ಕನ

ನಾಯ್ಗೆ ಹಾಕೋದ್ನ ನಂಗಾಕು
ಕೊತ್ತಿಗಾಕೋದ್ನ ಕುತ್ಗೆಗಾಕು ಅಂತಾರ್ಕನ
ಇಸ್ಕಳಕ್ಕೆ ಎಲ್ರೂಗೂ ಈಟ್ ಉದ್ದ ಕೈ
ಕೊಡಾಕ್ ಮಾತ್ರ ಕೈ ಗುಡ್ಡ ಕನ

ನೆನ್ ಆಡಿದ್ ಮಾತ್ಗೆ ಇವತ್ ಬೆಲಿಲ್ಲ ಕನ
ಮುಯ್ಯಾಳ್ ಮಾಡ್ಕಂಡ್ ನೆಚ್ಕಂಡಿದ್ವಲ್ಲೋ
ಈಗಂಗಿಲ್ಲ ಕನ...ನೊಚ್ಚುಗೆ ಮಾತಾಡ್ತಾರೆ
ಎಲುಬಿಲ್ಲುದ್ ನಾಲ್ಗೆ ಎತ್ತಕ್ ಬೇಕಾರ್ ಹೊರುಳ್ತೆ ಕನ

ಕಾಸ್ ಮುಂಚಿಡು
ಚೇಮೆ ಆಮ್ಯಾಕೆ ಅಂತಾರ್ ಕನ
ಒಂದ್ ಸೇರ್ ಅಕ್ಕಿಗೆ ಎಂಡ್ ಸೇರ್ ರಾಗಿಟ್
ಕೊಡ್ತಿದ್ ಕಾಲ ಎಲ್ಲೋತಾ...????

-ಮಯಾಸ


No comments:

Post a Comment