Tuesday 25 September, 2012

ಕಳ್ಗಂಟು ಮನ್ಲಿರ್ತಿರ್ಲಿಲ್ಲ..!




ಊರ್ಕಡೆ ಮನ್ಬಾಗ್ಲಿಗೆ


ಚಿಲುಕ್ವೆ ಇರ್ತಿರ್ಲಿಲ್ಲ ಅಲ್ಲೆನ..?


ಹಿತ್ಲಾ ಬಾಗ್ಲಿಗೊಂದ್

ವನ್ಕೆ ವತ್ಕೊಟ್ಟು

ಮುಂದ್ಲಾ ಬಾಗ್ಲಂಗೆ

ಮುಂದ್ಕೆಳ್ಕಂಡೋತಿದ್ವಿ...!


ಕಳ್ರು ಪಳ್ರು ಕಾಟಿರ್ಲಿಲ್ಲ

ಕಳ್ಗಂಟು ಮನ್ಲಿರ್ತಿರ್ಲಿಲ್ಲ..!


ಮನ್ಸುತ್ತಾ ಮಿಲುಟ್ರಿ ಪಡೆ

ಹೊಸೆಜ್ಜೆ ಕಂಡ್ರೆ

ವಿಚಿತ್ರವಾಗ್ ಹಕ್ಕಿ ಕಿಂಯ್ ಗುಡಾವು

ನಾಯ್ ಬೊಗಳಾಕ್ ಹತ್ತೋವು ಕನ..!


ಅದ್ಯಾಕ ಇತ್ತಿತ್ಲಾಗೆ...

ಮನುಸ್ರುಗೆ ಮನುಸ್ರು ಕಂಡ್ರಾತ್ತಿಲ್ಲ...!


ನಗಾಡಕೆ ಬರ್ದಿರ

ಜನ್ಕೆ -

ಅಳ್ದೂ ತೂಗಿ ಮಾತಾಡ

ಮಂದ್ಗೆ-

ಯೋನೇಳನಾ...ಕನಾ...!?!
  
-ಮಯಾಸ

No comments:

Post a Comment