Friday 7 September, 2012

ಹುಡುಗ್ತೀವ್ನಿ ಎಲ್ಲೆಲ್ಲೂ ಕಾಣವ್ಲೂ...!!!

ಬಾಲದಾವ್ರೆ ಹೂವ್ ಮುಡ್ಕಂಡ್
ಬಳುಕಂಡ್ ನಡಿಯೋಳು

ಚೆಂಡೂವ ಮುಡಿಕಂಡ್ರೆ
ಚಂದ್ರೂನಂಗ್ ಹೊಳಿಯೋಳು

ದುಂಡ್ ಮಲ್ಗೆ ಮುಡಿಕಂಡು
ಮಳ್ಳಿಯಂಗ್ ಇರೋಳು

ಜಾಜಿ ಹೂ ಕುಯ್ತಾನೆ
ಕಿಸ್ಗುಡ್ಕಂಡ್ ನಗೋಳು

ಉದ್ದೀತೊಟ್ಟೀನ್ ಹೂ ಹಿಡಿಕಂಡ್
ಊರೆಲ್ಲಾ ಅಲ್ಯೋಳು

ಬೆಟ್ಟದ್ ಕಣಗಲ್ ಹೂ ಬಾಚ್ಕಂಡ್
ಬಾರೆಮೇಲ್ ಕೂರೋಳು

ದಾಸವಾಳದ ಹೂವ್ ಸಿಕ್ರೆ
ದಾನಪಾನ ಮಾಡೋಳು

ಕನುಕಾಂಬ್ರಾ ಹೂ ಕಂಡ್ರೆ
ಕಣ್ ಕಣ್ ಬಿಡೋಳು

ಸೇವಂತ್ಗೆ ಹೂ ಸಿಗ್ತೋ
ಸ್ವಾಮಿಗ್ ಮಾಲೆ ಪೋಣ್ಸೋಳು

ಸಂತೆಪಂತೆ ಜಾತ್ರೆಗೋಗೋವಾಗ
ಮಾರುದ್ದ ಹೂ ಮುಡಿಯೋಳು

ಚೀಟಿ ಹೂ ಹೆರ್ಕೋವಾಗ
ಸೀಟಿ ಹೊಡ್ಕಂಡ್ ಪದ ಬುಡೋಳು

ಇಂತುಡ್ಗೀ ಹುಡುಗ್ತೀವ್ನಿ
ಎಲ್ಲೆಲ್ಲೂ ಕಾಣವ್ಲೂ...!!!
-ಮಯಾಸ
Photo: ಬಾಲದಾವ್ರೆ ಹೂವ್  ಮುಡ್ಕಂಡ್ 
ಬಳುಕಂಡ್  ನಡಿಯೋಳು

ಚೆಂಡೂವ ಮುಡಿಕಂಡ್ರೆ
ಚಂದ್ರೂನಂಗ್  ಹೊಳಿಯೋಳು

ದುಂಡ್ ಮಲ್ಗೆ  ಮುಡಿಕಂಡು
ಮಳ್ಳಿಯಂಗ್ ಇರೋಳು

ಜಾಜಿ ಹೂ ಕುಯ್ತಾನೆ
ಕಿಸ್ಗುಡ್ಕಂಡ್ ನಗೋಳು

ಉದ್ದೀತೊಟ್ಟೀನ್ ಹೂ  ಹಿಡಿಕಂಡ್
ಊರೆಲ್ಲಾ ಅಲ್ಯೋಳು

ಬೆಟ್ಟದ್ ಕಣಗಲ್ ಹೂ ಬಾಚ್ಕಂಡ್
ಬಾರೆಮೇಲ್ ಕೂರೋಳು

ದಾಸವಾಳದ ಹೂವ್ ಸಿಕ್ರೆ
ದಾನಪಾನ ಮಾಡೋಳು

ಕನುಕಾಂಬ್ರಾ ಹೂ ಕಂಡ್ರೆ
ಕಣ್ ಕಣ್ ಬಿಡೋಳು

ಸೇವಂತ್ಗೆ ಹೂ ಸಿಗ್ತೋ
ಸ್ವಾಮಿಗ್ ಮಾಲೆ ಪೋಣ್ಸೋಳು

ಸಂತೆಪಂತೆ ಜಾತ್ರೆಗೋಗೋವಾಗ
ಮಾರುದ್ದ ಹೂ ಮುಡಿಯೋಳು 

ಚೀಟಿ ಹೂ ಹೆರ್ಕೋವಾಗ
ಸೀಟಿ ಹೊಡ್ಕಂಡ್  ಪದ  ಬುಡೋಳು

ಇಂತುಡ್ಗೀ ಹುಡುಗ್ತೀವ್ನಿ
ಎಲ್ಲೆಲ್ಲೂ ಕಾಣವ್ಲೂ...!!!
    -ಮಯಾಸ

No comments:

Post a Comment