Wednesday 26 September, 2012

'ಕಾಡ್ಗೆ ಕಾಡೇ ಕ್ಯೊಂಪಾಗಕಿಲ್ವಾ'



ನನ್ನೂರ್ನ ಬೆಟ್ಟ ಗುಡ್ದಾಗ
ನನ್ ಅಜ್ಜುನ್ ಕಾಲ್ದಲ್ಲಿ
ಹುಲಿ,ಸಿಂವ ,ಆನ್ಕಾಟಂತೆ ಕನ..!

ಅಟಾಡ ವಯಸ್ನಾಗ ಅದೇ ಕಾಡೊಳ್ಗೆ
ರಂಬೆ ಕ್ವಂಬೆ ಹಿಡ್ಕಂದ್
ಜೋತಾಡ್, ಕುಣ್ದಾಡುದ್ ಗ್ಯಾಪಕೈತೆ ನಂಗೆ

ಕುಪ್ಳಿಸಿ ನಲಿದ ರಂಬೆಕೊಂಬೆಗಳ
ಕರೆಂಟ್ ನೆಪ್ದಲ್ಲಿ ಮೊನ್ಮೊನ್ನೆ
ಕತ್ರುಸಿ, ಹರಿಯ ನೀರ್ಗೆ ಕಟ್ಟೆ ಕಟ್ಟವ್ರೆ

ರಂಬೆಕ್ವಂಬಿಲ್ದದ ಅದೇ ಕಾಡ್ನಾಗ
ಕೊಂಬಿಂಗ್ ನಡಸವ್ರಂತೆ ಕನ
ಕೋವ್ಗೆ ಕೋವಿ ತೋರ್ಸ್ ಓಡುಸ್ತಾರಂತ್ ಕನ

ಚಿಕ್ಕುದ್ರಲ್ ನಾವಾಡ್ತಿದ್
ಕಳ್ಳ ಪೋಲಿಸ್ರಾಟ ನೆನ್ಪಾತು ಕನ
ಯುಲ್ಲಿ ಕಳ್ರಾರು ಪೋಲಿಸ್ರಾರಾ...?

ಇಬ್ರೂ ಕೈಲು ಕೋವ್ ಅದಾವೆ
ಇಬ್ರೂ ಕಾನೂನೆ ಮಾತಾಡ್ತಾರಂತಲ
ಹಸ್ರೆಲೆ ಮ್ಯಾಕೆ ರಕ್ತ ಚುಮ್ತದಾ..???

ಕಾಡ್ಗೆ ಕಾಡೇ ಕ್ಯೊಂಪಾಗಕಿಲ್ವಾ....?
ಇಬ್ರೂ ಕೋವಿ ಕೆಳ್ಗಿಟ್ರೆ-ಕಣ್ಬುಟ್ರೆ
ಯಂತ್ಯಂತ ಹೂ ಸಿಗ್ತಾವಲ್ವೇನಾ ಇಬ್ರೂ ಕೈಗೂ...?!?
 
-ಮಯಾಸ

No comments:

Post a Comment